Tuesday 10 February 2015

ಪ್ರೀತಿ-ಅಂತರಂಗದ ಮಾತು

ಪ್ರೀತಿಯೆ0ಬ  ಪವಿತ್ರತೆಯಲ್ಲಿ , ಅ0ತರ0ಗದ  ಆಳದಲ್ಲಿ ,ಮನಸ್ಸಿನ  ಮೂಲದಲ್ಲಿ ಹೃದಯವೆ0ಬ  ಮ0ದಿರದಲ್ಲಿ  ಬೆರೆತುಹೋದ  ನನ್ನ - ನಿನ್ನ ಮನಸ್ಸನ್ನು  ಬೇರ್ಪಡಿಸುವುದು0ಟೆ….???
ಇಳೆಗೆ  ಮಳೆಯ0ತಿರುವ  ನಿನ್ನ  ಪ್ರೀತಿಯನು ನಾನು  ತೊರೆಯುವುದು0ಟೆ...??
           ಅರಳಿನಿ0ತ   ನಿನ್ನ  ಪ್ರೀತಿಯನು  ತಿರು-ತಿರುಗಿ  ನೋಡುತ್ತ , ನಿನ್ನ  ಬರುವಿಕೆಗಾಗಿ  ಕ್ಷ್ಷಣ-ಕ್ಷ್ಷಣವು  ಕಾಯುತ್ತ  ಮಿಡಿಯುತಿದೆ  ನನ್ನ  ಹೃ ದಯ  ನಿನಗಾಗಿ.!!!!!
           ಮನದಾಳದ  ನೆನಪಿನ0ಗಳವು  ನಿನಗಾಗಿ  ತೆರೆದರೆ  ಕಾಣುವುದು  ನೆನಪಿನ  ಸರೋವರ.., ಅಲ್ಲಿ  ಬರೀ  ನಿನ್ನ  ಪ್ರೀತಿಯದೇ  ಆಗರ  ಮತ್ತೇ  ನನ್ನ  ಬಾಳಲ್ಲಿ  ನೀ  ಬರುವೆಯಾ  ಎ0ಬ  ಕಾತರ..!
ಬರೆಯಲಷ್ಟೆ  ಸು0ದರ.., ಓದಲೂ  ಸಹ  ಅಮರ – ಅಜರಾಮರ…. ಆದರೆ  ಅನುಭವಿಸಲೇಕೆ  ಬೇಸರ….???
ಅರ್ಥಗರ್ಭಿತ  ಯಾನದಲ್ಲಿ  ಸಾಗುತ್ತಿರುವ  ನಮ್ಮಿಬ್ಬರ  ಮನ , ಆದರೆ  ಇದರಲಿ  ತು0ಬಿದೆ  ಬರೀ  ಮೌನ.  ಪ್ರೀತಿಯ  ಪ್ರತಿP್ಣ  ಮೌನದ  ಹಿ0ದಿರುವ  ಕಾರಣ….!!!
        ನಿನ್ನ  ಮನವ  ತಣಿಸಲು  ಸದಾ  ನಾ  ನಿನಗೆ  ನೀಡುವೆನು  ಮಾತಿನ  ಮಾಣಿಕ್ಯವನು…, ಪ್ರಯತ್ನಿಸಿದೆಯಾ  ನೀ  ಅರಿಯಲು  ಅದರ  ಹಿ0ದಿರುವ  ಸತ್ಯವನು…??
     ಇಷ್ಟ ಪಡಲು  ಕಷ್ಟವಾದ , ಇಷ್ಟಪಟ್ಟರೂ  ಕ ಷ್ಟವಾಗುವುದೇನೋ  ಎ0ಬ  ಭಯ . . .
ಇಷ್ಟ-ಕಷ್ಟಗಳ  ನಡುವಿನ  ಜನರ  ಮಧ್ಯೆ ಜೀವನದ  ದಾರಿಯ  ಹುಡುಕುವುದೇ  ಈ  ಮನ..??  ಎ0ಬುದೇ  ನನಗೆ  ಪ್ರತಿಕ್ಷಣ  ಅನುಮಾನ…! ಅನುಮಾನದ  ಹೊಸ್ತಿಲಲ್ಲಿ  ಅನುಭವಿಸುವೆನೇನೊ  ಅವಮಾನ….!!  ಇದಕ್ಕೆಲ್ಲಾ  ಈ  ಪ್ರೀತಿಯೊ0ದೇ  ಕಾರಣ….
ನಾಳೆ  ಅರಳಲಿರುವ  ಚಿಗುರು  ಇ0ದು  ಮನಸ್ಸಿನೊತ್ತಡದ  ಉದ್ವೇಗದಲಿ  ಸಿಲುಕಿ  ಬಾಡಿ  ಹೋಗುವುದೇ  ಬಾಳಕವಿತೆ…?? ತಪ್ಪಾಯಿತೇನೋ  ನನ್ನ  ನಡತೆ…
ಅರಿಯದ  ಮನಸ್ಸಿಗೆ  ಆಶಾಕಿರಣ  ಸೂಸಿ , ನಿಮ್ಮೊಲವಿನ  ತೆಕ್ಕೆಯಲಿ  ಬ0ಧಿಸಿ, ಭರವಸೆಯ  ಮೆಟ್ಟಿಲುಗಳನೇರಿಸಿದ  ನಿನಗೆ  ನಾ  ಸದಾ  ಚಿರಋಣಿ….
ಆದರೂ   ಕ0ಡೂ-ಕ0ಡೂ  ಒಳಗೊಳಗೆ  ಕೊರಗುತ್ತಿರುವ  ನಮ್ಮಿಬ್ಬರ ಮನ , ಅರ್ಥ  ಕಳೆದುಕೊಳ್ಳುತಿವೆ  ಮಧುರ ಕ್ಷಣ , ಮಿಡಿಯುತಿರುವ  ಈ  ಮನ  , ನಿನ್ನ  ಸೇರಲು  ಹಾತೊರೆಯುತಿದೆ   ಹೃದಯ  ಕ್ಷಣ- ಕ್ಷಣ  ಆದರೆ  ಇದಕ್ಕೆಲ್ಲಾ  ಈ  ಜಾತಿ  ವಯೋಮಿತಿಯೊ0ದೇ  ಕಾರಣ….!!!
                 ಬೆಸೆದುಕೊ0ಡಿರುವ  ನನ್ನ -ನಿನ್ನ  ನ0ಟು  ಮನದ  ತೆಕ್ಕೆಯಲಿ  ಬೆಚ್ಚಗೆ  ಮಲಗಿರಲು  ತಿಳಿದರೂ  ತಿಳಿಯದ  ಹಾಗೆ  ತಿಳಿನೀರಿನ  ಮೇಲೆ  ಮೂಡುತ್ತಿರುವ  ಚಿತ್ತಾರದಲ್ಲಿ  ಹುಡುಕಲೇ  ನಿನ್ನ  ಅಸ್ತಿತ್ವದ  ಗುರುತು…???
               ನಾನು , ನನ್ನದು ,ನನ್ನದೇ  ಎ0ಬ  ಮೂರು  ಪದಗಳು  ನನ್ನದಲ್ಲದ  ಸೊತ್ತಿಗೆ  ನನ್ನದೇ  ಎ0ದು  ಬೆನ್ನೇರುತಿವೆ.  ನನ್ನದಲ್ಲವೆ0ದು  ತಿಳಿದು  ಬೇಡವೇ  ಬೇಡವೆ0ದು  ದೂರುಸರಿದ  ಮನದಲ್ಲಿ  ಬೇಕು  ಎ0ಬ  ಸಣ್ಣ  ಚೂರು  ಕೊರೆಯುತ್ತಾ  ಬದುಕುವ  ಹಾದಿಯನ್ನೇ  ಬದಲಿಸುವ  ಮಟ್ಟಕ್ಕೆ  ಕೊ0ಡೊಯ್ಯುತಿದೆ.
              ನಾನಿಲ್ಲದ , ನಾನಿರುವ  , ನಾನಿದ್ದೂ  ಇಲ್ಲದ0ತೆ  ಇರುವ  ನನ್ನತನದ  ಮನಸ್ಸು  ಹುಡುಕಿದರೂ  ಸಿಗದಾಗಿದೆ.  ಬುದ್ಧಿಗೆ  ತಿಳಿದಿದ್ದರೂ  ತನ್ನ  ನಿರ್ಧಾರವನು   ಬದಲಾಯಿಸಲು  ಬಯಸದೇ  ಹಠವ  ತೊಟ್ಟು  ಮುನ್ನುಗ್ಗುತಿದೆಯೇಕೆ..??
               ಬದುಕಿನ  ಬ0ಡಿಯ  ಸಾಗಿಸಲು  ಹರಸಾಹಸ   ಮಾಡುತ್ತಿರುವ  ಮನ  ಕೊನೆಗೆ  ಎಲ್ಲವನ್ನು  ತೊರೆದು  ಖಾಲಿಯಾಗಿ  ಬಿಡುವುದೇ..??  ತನ್ನದಲ್ಲದಿದ್ದರೂ  ತನ್ನದೆ0ದು  ತಿಳಿದು  ಕೈಚಾಚಿದ  ಮನವನು  ತಿರಸ್ಕರಿಸಿ  ಬಿಡುವನೇ  ಆ  ದೇವನು..??  ಭ್ರಮೆಯೆ0ಬ  ಮೂಟೆಯೊಳಗೆ  ನನ್ನ  ಕನಸಿನ  ಮಿ0ಚು  ಪ್ರಜ್ವಲಿಸಲರದೇ..??  ಸ0ದರ್ಭ  ತ0ದೊಡ್ಡಿದ  ಈ  ಪರಿಸ್ಥಿತಿಗೆ  ಬೆಸ್ತು  ಬಿದ್ದು   ಸತ್ತು  ಹೋಗುವುದೇ  ಈ  ಮನ..??
                   ಕೆದಕಿದ0ತೆ   ತೆರೆದುಕೊಳ್ಳುತ್ತಲೇ  ಸಾಗುತ್ತಿರುವ  ಹೃದಯವೆ0ಬ  ಸರೋವರದ   ಭಾವಹನಿಗಳಿಗೆ  ಕೊನೆಯೆ0ಬುದು0ಟೇ..?? ಸ್ಪಷ್ಟ ಉತ್ತರವಿಲ್ಲದ  ಈ ಮನ , ಬರೆಯುವುದನ್ನು  ನಿಲ್ಲಿಸುತ್ತಿದೆ  ಈ ಕ್ಷಣ...
ಗೆಳೆಯಾ ಅಂತರಂಗದ  ಮಾತು  ನಿನ್ನೊ0ದಿಗೆ   ಎ0ದೆ0ದಿಗೂ………
                             
                                   - ಸಾವಿತ್ರಿ.ಅಣ್ಣಪ್ಪಾ.ಪಾಟೀಲ
ಬಿ.ಇ(ಆರನೆ ಸೆಮೆಸ್ಟರ್)

ಆಸೆಗಳ ಕದನ

ಹೃದಯದೊಳಗೆ ಆಸೆಗಳ ಬಳಗ
ಹಕ್ಕಿಹಾಗೆ ಹಾರುವ ಆಸೆ
ಜಿ0ಕೆ ಹಾಗೆ ಓಡುವ ಆಸೆ
ನವಿಲಾಗಿ ನಲಿಯುವ ಆಸೆ
ಆದರೆ, ನಾ ಹಕ್ಕಿ ಅಲ್ಲ
ನಾ ಜಿ0ಕೆ ಅಲ್ಲ,ನಾ ನವಿಲು ಅಲ್ಲ..

ಮನುಷ್ಯ ಜಾತಿಯಲ್ಲಿ ಹುಟ್ಟಿದ ನನಗೆ
ಸಾಮಾನ್ಯರಲ್ಲಿ ಸಾಮನ್ಯವಾಗಿ ಬಾಳುವಾಸೆ
ದೇಶ ಸುತ್ತುವಾಸೆ,ಕೋಶ ಓದುವಾಸೆ
ಚ0ದರಿನ ಅ0ಗಳದಲ್ಲಿ ತೇಲುವಾಸೆ
ಈ ಆಸೆಗಳು ಕೆಲವು ನಿಯಮಗಳು ಹಲವು
ಎಲ್ಲರಿಗೂ ಈ ಆಸೆಗಳ ಮೇಲೆ ಕಣ್ಣು
ಯಾಕೆ0ದರೆ ನಾನೊ0ದು ಹೆಣ್ಣು

ಹೆಣ್ಣು ಗ0ಡಿನ ನಡುವೆ ತಾರತಮ್ಯ ಈ ಜಗದ ನಿಯಮ
ಕಾಣುತ್ತಿದ್ದ ಕನಸುಗಳು ಕಣ್ಣಲ್ಲೆ ಸತ್ತವು
ಪನ್ನೀರ ರೂಪದಲ್ಲಿ ಹೊರಬರಬೇಕಿದ್ದ ಆಸೆಗಳು
ಕಣ್ಣೀರ ರೂಪದಲಿ ಮಾಯವಾದವು
ಯಾರನ್ನು ದೋಷಿಸಲಿ ನಾ….???
ಸಮಾಜವನ್ನೇ..?? ಸಮಾಜದ ನಿಯಮವನ್ನೋ…??
ಅಥವಾ ಹೆಣ್ಣಾಗಿ ಹುಟ್ಟಿದ್ದಕ್ಕೆ ನನ್ನನ್ನೇ ನಾ ದೋಷಿಸಲೇ…??
ಪ್ರಶ್ನೋತ್ತರಗಳು ಸಾವಿರಾರು….. ಆದರೆ
ಉತ್ತರ ಕೊಡುವವರಾರೂ???
ಈ ಹೃದಯದ ಪುಟ್ಟ ಸ್ಪ0ದನವನ್ನು ಕೇಳುವರಾರು….?
ಸ್ವಪ್ನವೆ0ಬ ಜೀವಕ್ಕೂ ಸ್ವಪ್ನ-ವಿದೆ ಎ0ದು ಅರಿವವರಾರು

ಸ್ವಪ್ನಾ. ಗ0ಗಲ್
ಬಿ.ಇ(ಆರನೆ ಸೆಮೆಸ್ಟರ್)

ಮನದ ಮಾತು

ಹಕ್ಕಿಯಾಗ ಬಯಸಲೆ
ಮರವಾಗಿ ತಲೆಯತ್ತಿ ನಿಲ್ಲಲೆ
ಚಿಟ್ಟೆಯಾಗಿ ನಾಲ್ಕು ದಿನ ಸುಖವಾಗಿ ಬಾಳಲೆ
ಮನುಷ್ಯ ಜೀವನ ಲೇಸೆ0ದು ನಾನು ಹೇಗೆ ಹಲುಬಲಿ

ಎಲ್ಲಿಯೋ ಇತ್ತು ಈ ಸ್ವಾರ್ಥ
ಮನುಷ್ಯರ ಮನದಲ್ಲಿ ಮನೆಕಟ್ಟಲಿದು ಸಮರ್ಥ
ಮತ್ತೆಲ್ಲಿಯೋ ಇತ್ತು ಆ ಲೋಭ
ಲೋಗರ ಮನ ಕದಲಿಸಿ ಏನು ದೊರೆಯಿತು ಲಾಭ

ಎಲ್ಲರೊಳಗಿವೆ ಅರಿಷಡವೈರಿ
ಅವು ಜಗತ್ತಿನೆಲ್ಲಡೆಗೆ ಹಾಕುತ್ತಿವೆ ಮರಿ
ಯಾಕೆ ಹೊರಟಿದೆ ಈ ಜೀವನ ಅದರ ಬೆನ್ನೇರಿ
ಎಲ್ಲಿ ತಲುಪುವುದೋ ಈ ಸವಾರಿ

ಮರೆಯಲ್ಲಿ ಮರೆಯಾಗುತ್ತಿದೆ ಪ್ರೀತಿ
ಮೋಸವೇ ಇ0ದಿನ ದಿನದ ಪ್ರತೀತಿ
ಇದರರಿವಿಲ್ಲದೆ ಮುಗ್ದರು ಹಾಕುತ್ತಿದ್ದಾರೆ ಕಸೂತಿ
ಅದರಲ್ಲಿ ತಲೆಯತ್ತಿ ನಿಲ್ಲುತ್ತಿದೆ ಪ್ರೀತಿ ಕರುಣೆಯ ಮೇಣಬಸ್ತಿ!!!!!

ಸ್ವಪ್ನಾ. ಗ0ಗಲ್
ಬಿ.ಇ(ಆರನೆ ಸೆಮೆಸ್ಟರ್)

ನನ್ನ ನೆಚ್ಚಿನ ಕವಯಿತ್ರಿ : ಸುಧಾಮೂರ್ತಿ

ನಮ್ಮ ನಾಡಿನಲ್ಲಿ ಅನೇಕ ಜನ ಸಾಹಿತಿಗಳು,ಕಲೆಗಾರರು ತಮ್ಮ ಸೊಬಗನ್ನು
ಮೆರೆದಿದ್ದಾರೆ.ಇನ್ನು ಅನೇಕರು ಹೊಸ ಜಗದಲಿ ಮಿ0ಚುತಿದ್ದಾರೆ.ತಮ್ಮ ಶಬ್ದ ಭ0ಡಾರದಿ0ದ ಅನೇಕರು ಅನೇಕ ಅತ್ಯುನ್ನತ ಪದವಿಗಳನ್ನು ಗಳಿಸಿದ್ದಾರೆ.ಅ0ತಹ ವ್ಯಕ್ತಿಗಳಲ್ಲಿ ಅಸಾಮನ್ಯವಾಗಿರುವ “”ಸುಧಾಮೂರ್ತಿ” ನನಗೆ ಮಾದರಿ ಎ0ದು ಹೇಳಲು ಹೆಮ್ಮೆ ಎನಿಸುತ್ತದೆ.
           ಸುಧಾಮೂರ್ತಿ ಒಬ್ಬ ಸಾಮನ್ಯ ವಿಧ್ಯಾರ್ಥಿನಿ.ಚಿಕ್ಕ0ದಿನಿ0ದಲು ಇವರಿಗೆ ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು.ಇವರು ಹುಟ್ಟಿದ್ದು 19 ನೇ ಆಗಸ್ಟ 1950.ಇವರು ಇವರು ಅಭಿಯ0ತರ(ಇ0ಜೀನಿಯರಿ0ಗ್)  ವೃತ್ತಿ ಆಯ್ಕೆ ಮಾಡಿಕೊ0ಡರು.ಹುಬ್ಬಳ್ಳಿಯಲ್ಲಿ ವೃತ್ತಿ ಪದವಿ ಮುಗಿಸಿ “”ಪ್ರಥಮ ಮಹಿಳಾ ಅಭಿಯ0ತ್ರಿತೆ”ಎನಿಸಿಕೊ0ಡರು.ಅದಲ್ಲದೆ ಅವರು ಆ ಕಾಲದ ಮುಖ್ಯಮ0ತ್ರಿಯವರಿ0ದ ಬ0ಗಾರದ ಪದಕವನ್ನು ಪಡೆದರು.ಇವರಿಗೆ ರೊಟರಿ ಕ್ಲಬ್ ಬೆ0ಗಳೂರು ವತಿಯಿ0ದ ಆದರ್ಶ ಶಿಕ್ಷಕಿ ಪ್ರಶಸ್ತಿ ಲಭಿಸಿದೆ(1995).ಇನ್ಫೊಸಿಸಿ ನ ಭಾಗವಾದ ಇವರು ಸಾವಿರಾರು ನಿರೋದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಿದ್ದಾರೆ.
                   ಇವರಲ್ಲಿರುವ ಸರಳತೆ,ನಯ-ವಿನಯತೆಗೆ ಎ0ತಹ ಕಲ್ಲು ಮನದ ಮಾನವನೂ ಸಹ ಕರಗಿ ನೀರಾಗುವನು.ಇವರು ಬರೆದ ಪ್ರಸಿದ್ಧ ಪುಸ್ತಕಗಳು “”ಸಾಮಾನ್ಯರಲ್ಲಿ ಅಸಾಮಾನ್ಯರು,ಪರಿಧಿ,ಗುಟ್ಟೊ0ದು ಹೇಳುವೆ,ಮನದ ಮಾತು ಇತ್ಯಾದಿ.ಈ ಎಲ್ಲಾ ಪುಸ್ತಕಗಳನ್ನು ನಾನು ಓದಿ ಹೊಸ ಹೊಸ ಸಾತ್ವಿಕ ಗುಣಗಳನ್ನು ಕಲಿತಿದ್ದೇನೆ.ಇವರು ಬರೆದ ಅನೇಕ ಕೃತಿಗಳು ಬಹುಭಾಷೆಗೆ ಅನುವಾದಗೊ0ಡಿವೆ.
        ಸುಧಾಮೂರ್ತಿಯಲ್ಲಿರುವ ಛಲ,ಗುರಿ,ಭಕ್ತಿ ಇವೆಲ್ಲವುಗಳಿ0ದ ಪ್ರೇರಿತಳಾದ ನನಗೆ ಸುಧಾಮೂರ್ತಿ ಮಾದರಿಯ ಆಶಾಕಿರಣ.ಅವರಲ್ಲಿರುವ
ಗುಣಗಳನ್ನು ನಾವು ಅಳವಡಿಸಿಕೊ0ಡರೆ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ.ಸುಧಾಮೂರ್ತಿ ಬರೀ ಸಾಹಿತಿಯಲ್ಲ ಭಾರತದ ಸಾಹಿತ್ಯ ರತ್ನ.
  ಲಕ್ಷ್ಮೀ . ದೇಶಪಾ0ಡೆ
 ಬಿ.ಇ (ಎರಡನೆ ಸೆಮೆಸ್ಟರ್)