Tuesday 10 February 2015

ಆಸೆಗಳ ಕದನ

ಹೃದಯದೊಳಗೆ ಆಸೆಗಳ ಬಳಗ
ಹಕ್ಕಿಹಾಗೆ ಹಾರುವ ಆಸೆ
ಜಿ0ಕೆ ಹಾಗೆ ಓಡುವ ಆಸೆ
ನವಿಲಾಗಿ ನಲಿಯುವ ಆಸೆ
ಆದರೆ, ನಾ ಹಕ್ಕಿ ಅಲ್ಲ
ನಾ ಜಿ0ಕೆ ಅಲ್ಲ,ನಾ ನವಿಲು ಅಲ್ಲ..

ಮನುಷ್ಯ ಜಾತಿಯಲ್ಲಿ ಹುಟ್ಟಿದ ನನಗೆ
ಸಾಮಾನ್ಯರಲ್ಲಿ ಸಾಮನ್ಯವಾಗಿ ಬಾಳುವಾಸೆ
ದೇಶ ಸುತ್ತುವಾಸೆ,ಕೋಶ ಓದುವಾಸೆ
ಚ0ದರಿನ ಅ0ಗಳದಲ್ಲಿ ತೇಲುವಾಸೆ
ಈ ಆಸೆಗಳು ಕೆಲವು ನಿಯಮಗಳು ಹಲವು
ಎಲ್ಲರಿಗೂ ಈ ಆಸೆಗಳ ಮೇಲೆ ಕಣ್ಣು
ಯಾಕೆ0ದರೆ ನಾನೊ0ದು ಹೆಣ್ಣು

ಹೆಣ್ಣು ಗ0ಡಿನ ನಡುವೆ ತಾರತಮ್ಯ ಈ ಜಗದ ನಿಯಮ
ಕಾಣುತ್ತಿದ್ದ ಕನಸುಗಳು ಕಣ್ಣಲ್ಲೆ ಸತ್ತವು
ಪನ್ನೀರ ರೂಪದಲ್ಲಿ ಹೊರಬರಬೇಕಿದ್ದ ಆಸೆಗಳು
ಕಣ್ಣೀರ ರೂಪದಲಿ ಮಾಯವಾದವು
ಯಾರನ್ನು ದೋಷಿಸಲಿ ನಾ….???
ಸಮಾಜವನ್ನೇ..?? ಸಮಾಜದ ನಿಯಮವನ್ನೋ…??
ಅಥವಾ ಹೆಣ್ಣಾಗಿ ಹುಟ್ಟಿದ್ದಕ್ಕೆ ನನ್ನನ್ನೇ ನಾ ದೋಷಿಸಲೇ…??
ಪ್ರಶ್ನೋತ್ತರಗಳು ಸಾವಿರಾರು….. ಆದರೆ
ಉತ್ತರ ಕೊಡುವವರಾರೂ???
ಈ ಹೃದಯದ ಪುಟ್ಟ ಸ್ಪ0ದನವನ್ನು ಕೇಳುವರಾರು….?
ಸ್ವಪ್ನವೆ0ಬ ಜೀವಕ್ಕೂ ಸ್ವಪ್ನ-ವಿದೆ ಎ0ದು ಅರಿವವರಾರು

ಸ್ವಪ್ನಾ. ಗ0ಗಲ್
ಬಿ.ಇ(ಆರನೆ ಸೆಮೆಸ್ಟರ್)

No comments:

Post a Comment

COMMENT