Monday 13 April 2015

ಮೌನ ಮಾತಾದಾಗ...

         ಕಡಲೂರು  ಎಂಬ  ಊರು.  ಸದಾ  ಹಸಿರನ್ನೇ  ತನ್ನ  ಉಸಿರಾಗಿ  ತುಂಬಿಕೊಂಡಿದ್ದ  ಊರು.  ಅಲ್ಲಿಯ  ಎಲ್ಲಾ  ಜನರು   ಭಾವೈಕ್ಯತೆಯಿಂದ  ಇದ್ದರು. ಈ  ಎಲ್ಲಾ  ಸಂಬಂಧಗಳಿಗಿಂತ  ಹೆಚ್ಚಾದ  ಸಂಬಂಧವೆಂದರೆ  ಸ್ನೇಹ . ಆ ಊರಿನಲ್ಲಿ  ನಾಲ್ಕು  ಜನ  ಸ್ನೇಹಿತರು  ಸುರೇಶ , ಬಸವರಾಜ, ಸೋಮು  ಮತ್ತು  ಮಹಲಿಂಗ. ಈ ನಾಲ್ಕು  ಜನರು  ಶಾಲೆಗೆ  ಹೋದರು, ಆಟವಾಡಿದರು, ಊಟಮಾಡುತ್ತಿದ್ದರು  ಸದಾ  ಜೊತೆಯಲ್ಲಿಯೇ  ಇರುತ್ತಿದ್ದರು. ಬಸವರಾಜ, ಸೋಮು, ಮಹಲಿಂಗ  ಮತ್ತು  ಸುರೇಶನ  ತಂದೆ, ತಾಯಿಯರು  ವ್ಯವಸಾಯವನ್ನು ಮಾಡುತ್ತಿದ್ದರು.  ಸುರೇಶನು   ಬಸವರಾಜ, ಸೋಮು ಮತ್ತು  ಮಹಲಿಂಗನಿಗಿಂತಲು  ಶಾಲೆಯಲ್ಲಿ  ಜಾಣನಾಗಿದ್ದನು.  ಸುರೇಶನು  ತನ್ನ  ಮನೆಯಲ್ಲಿರುವುದಕ್ಕಿಂತ  ಹೆಚ್ಚಾಗಿ   ಈ  ಮೂವರ  ಮನೆಯಲ್ಲಿರುತ್ತಿದ್ದನು. ಊರ  ಜನರೆಲ್ಲ, ಸುರೇಶನು  ಈ  ಮೂರು  ಹುಡುಗರು  ಸಹೋದರರೆಂದು  ತಿಳಿಯುವಷ್ಟು  ಇವರ  ಸ್ನೇಹ  ಪ್ರಸಿದ್ಧಿಯಾಗಿತ್ತು.

              ಕಾಲವು  ಹಾಗೇ  ಉರುಳುತ್ತಾ  ಹೋಯಿತು. ಈ  ನಾಲ್ಕು  ಜನ  ಸೇರಿ ಶಿಕ್ಷಣವನ್ನು  ಮುಗಿಸಿ  ನಾವು   ಸಹ  ವ್ಯವಸಾಯ  ಮಾಡುವುದು  ಬೇಡ, ಅದನ್ನು  ನೋಡಿಕೊಳ್ಳಲು  ಮನೆಯಲ್ಲಿ  ಕೆಲಸಗಾರರಿದ್ದಾರೆ. ಅದಕ್ಕೆ  ನಾವೆ¯್ಲ   ಸೇರಿ  ಏನಾದ್ರೂ  ಬ್ಯೂಸಿನೆಸ್  ಮಾಡೋಣವೆಂದು  ತೀರ್ಮಾನಿಸಿದರು. ಇದರ  ಮುಂದಾಳತ್ವವನ್ನು  ಸುರೇಶನು  ಹೊತ್ತುಕೊಂಡಿದ್ದನು. ಅಷ್ಟೋ  ಇಷ್ಟೋ  ಹಣ  ಸೇರಿಸಿ  ಬ್ಯೂಸಿನೆಸ್  ಪ್ರಾರಂಭಿಸಿದ್ದರು. ಈ  ಕೆಲಸವು  ಕೆಲವೇ  ದಿನಗಳಲ್ಲಿ  ಹೆಸರನ್ನುಗಳಿಸಿತು, ಸಾಕಷ್ಟು  ಹಣವನ್ನು  ಸಹ  ಗಳಿಸಿದರು.  ನಾಲ್ಕು  ಜನ  ಊಹಿಸಲಾಗದಸ್ಟು  ಹಣವನ್ನುಗಳಿಸಿ  ಸಿಟಿಗೆ  ಬಂದು  ವಾಸಿಸಿದರು.  ಆಗ  ಸುರೇಶನು “ ನಮಲ್ಲಿ  ಈಗ  ಸಾಕಷ್ಟು  ಹಣವಿದೆ  ಯಾಕೆ  ನಾವು  ಈ  ಬ್ಯೂಸಿನೆಸ್  ಜೊತೆ,  ಪ್ರತ್ಯೇಕವಾಗಿ  ಬೇರೆ  ಬ್ಯೂಸಿನೆಸಗಳನ್ನು  ಮಾಡಬಾರದು?” ಎಂದು  ಹೇಳಿದ.  ಆಗ  ಬಸವರಾಜ  ಬೇಡ  ಎಂದನು.  ಆದರೂ  ಬಿಡದೆ  ಸುರೇಶನು  ಎ¯್ಲರಿಗೂ  ಒಪ್ಪಿಸಿದನು.  ಆಗ  ಎಲ್ಲರೂ  ಸೇರಿ    ಬೇರೆ  ಬೇರೆ  ಬ್ಯೂಸಿನೆಸ್  ಆಯ್ದುಕೊಂಡರು.  ಆದರೆ  ಈ  ಕೆಲಸದಲ್ಲಿ  ಮಾತ್ರ  ಸುರೇಶನು  ಬೇಗನೆ  ಯಶಸ್ವಿಯಾದನು.  ಉಳಿದ  ಮೂವರು  ಸಾಕಷ್ಟು  ಹಣ  ಕಳೆದುಕೊಂಡರು. ಮೂವರು  ತುಂಬಾ  ಬೇಜಾರಾದರು. ಮೊದಲೇ  ಕಷ್ಟಪಟ್ಟುಗಳಿಸಿದ  ಹಣ  ಸುರೇಶನ  ಮಾತು  ಕೇಳಿ  ಕಳೆದುಕೊಂಡೆವೆಂಬುದು  ಅವರ ಮನಸಿನಾ  ಮಾತಾಯಿತು.  ಸ್ನೇಹದಲ್ಲಿ  ಸ್ವಲ್ಪ್ಪ  ಬಿರುಕು  ಮೂಡಿದಂತಾಯಿತು.

                           ದಿನಾಲೂ  ಕೆಲಸಕ್ಕೆ  ಜೊತೆಯಾಗಿ  ಹೋಗುತ್ತಿದ್ದವರು  ಒಂದು  ದಿನ  ಸುರೇಶನನ್ನು  ಬಿಟ್ಟು  ಮೂವರೇ   ಹೋದರು. ನಂತರ  ಸುರೇಶ  ಒಬ್ಬನೇ  ಅಫಿಸಗೆ  ಬಂದನು. ಸುರೇಶನಿಗೆ  ಇದರಿಂದಾಗಿ  ಮನಸ್ಸಿಗೆ  ತುಂಬಾ  ಬೇಜಾರಾಯಿತು. ಕೆಲಸ  ಮಾಡುವಾಗ  ತುಂಬಾ  ಸುಸ್ತಾಗಿ  ಕೆಳಗಡೆ  ಬಿದ್ದುಬಿಟ್ಟನು. ಇದನ್ನು  ನೋಡಿದ  ಅವನ ಗೆಳೆಯರು  ತಕ್ಷಣ  ಬಂದು  ಅವನನ್ನು  ಸೋಫಾ  ಮೇಲೆ  ಮಲಗಿಸಿದರು. ತಕ್ಷಣ  ಬಸವರಾಜ  ತನಗೆ  ತಿಳಿದ  ಡಾಕ್ಟರ್‍ಗೆ  ಫೋನ್  ಮಾಡಿ  ಕರೆಸಿದ. ಡಾಕ್ಟರ್  ಬಂದು  ಸುರೇಶನಿಗೆ    ಚೆಕಪ್  ಮಾಡಿ, “ನೀವು   ಕೆಲಸದಲ್ಲಿ  ತುಂಬ  ಕಾಲ  ಕಳೆಯುವುದರಿಂದ  ನಿಮ್ಮ  ಆರೋಗ್ಯ  ಬಹಳ  ಏರುಪೇರಾಗಿದೆ. ಅದಕ್ಕೆ   ಇವತ್ತಿನಿಂದ  ಒಂದು  ತಿಂಗಳಿನವರೆಗೆ  ನಾನು  ಔಷಧಿಯನ್ನು  ಹೇಳುವೆ.  ಅದನ್ನು  ನೀವು  ದಿನವೂ  ಲಸಿಕೆಯ  ಮುಖಾಂತರ  ತೆಗೆದುಕೊಳ್ಳಬೇಕು.ಪ್ರತಿದಿನ  ನಾನೇ  ಬಂದು  ಲಸಿಕೆಯನ್ನು  ನೀಡುವೆ” ಎಂದು  ಹೇಳಿ  ಹೋದರು.
             
          ಆ  ದಿನದಿಂದ  ದಿನವೂ  ರಾತ್ರಿ  ಊಟ  ಮಾಡುವುದಕ್ಕಿಂತ  ಮುಂಚೆ  ಡಾಕ್ಟರ್  ಮನೆಗೆ  ಬಂದು  ಲಸಿಕೆ  ಹಾಕುತ್ತಿದ್ದರು.  ಇದು  ಕ್ರಮೇಣ  ನಡೆಯುತ್ತಾ  ಹೋಯಿತು. ಒಂದು  ದಿನ  ಡಾಕ್ಟರ್  “ಸುರೇಶ,  ಇನ್ನು  ಮೇಲಿಂದ  ನಾನು  ಬರುವುದಿಲ್ಲ.  ಯಾಕೆಂದರೆ, ಬೇರೆ  ಕೆಲಸದ  ಮೇಲೆ   ಬೇರೆ  ಊರಿಗೆ  ಹೋಗುತ್ತಿರುವೆ”  ಎಂದನು. ಆಗ  ಸುರೇಶ,  “ಪರವಾಗಿಲ್ಲ  ಡಾಕ್ಟರ್  ನನಗೆ  ಈಗ  ಅಭ್ಯಾಸವಾಗಿದೆ. ನಾನೇ  ಲಸಿಕೆಯನ್ನು   ತೆಗೆದುಕೊಳ್ಳುವೆ”  ಎಂದನು. “ ಆಯ್ತು  ನಾನು  ಬರಲೇ?”  ಎಂದು  ಡಾಕ್ಟರ್  ಕೇಳಿದಾಗ , “ಒಂದು  ನಿಮಿಷ  ಡಾಕ್ಟರ್  ನಿಮ್ಮ  ಫೀ  ತರುವೆ”   ಎಂದು  ಒಳಗಡೆ  ಹೋದನು.  ಆಗ  ಡಾಕ್ಟರ್  ಔಷಧಿ  ಬೋಟಲ್‍ನ್ನು   ಸುರೇಶನ  ತಾಯಿಗೆ  ಕೊಟ್ಟು   “ಅವಸರವಾದ  ಕೆಲಸವಿದೆ,   ಫೀಯನ್ನು  ನಂತರ  ನಾನೇ  ತೆಗೆದುಕೊಳ್ಳುವೆ”  ಎಂದು  ಹೇಳಿ  ಹೋದರು.

           ಸುಮಾರು  ದಿನಗಳ  ನಂತರ  ಬಸವರಾಜ,ಮಹಲಿಂಗ  ಮತ್ತು  ಸೋಮು  ಸೇರಿ  ಸುರೇಶನಿಗೆ  ಪಾರ್ಟಿ  ಕೋಡಿಸೋಣವೇಂದು  ತೀರ್ಮಾನಿಸಿದರು. ಈ  ಪಾರ್ಟಿಗೆ  ಬೇಕಾದ  ಎಲ್ಲಾ  ಸಿದ್ದತೆಯನ್ನು  ಮಾಡಿಕೊಂಡು  ಸುರೇಶನಿಗೆ  ಮತ್ತು   ಉಳಿದ   ಕೆಲಸಗಾರರಿಗೆ  ತಿಳಿಸಿದರು. ಈ  ಮೂವರು  ಸೇರಿ  ಒಂದು  ದೊಡ್ಡ  ಪಾರ್ಟಿಯನ್ನೇ  ನಿರ್ಮಿಸಿದ್ದರು.  ಸುರೇಶನು  ಮನೆಯಿಂದ  ಬರುವಾಗ  ಅವರ  ತಂದೆಗೆ  “ರಾತ್ರಿ  ನಾನು  ಲೇಟಾಗಿ  ಬರುವೆ  ಪಾರ್ಟಿ  ಇದೆ   ನೀವು  ಊಟ ಮಾಡಿ  ಮಲಗಿಕೊಳ್ಳಿ”   ಎಂದು  ಹೇಳಿ  ಹೋದನು.  ಪಾರ್ಟಿ  ತುಂಬಾ  ಚೆನ್ನಾಗಿ  ಮುಗಿಯಿತು.  ಎಲ್ಲರ   ಊಟ  ಮುಗಿದ  ನಂತರ  ಬಸವರಾಜ,ಮಹಲಿಂಗ,ಸೋಮು  ಮತ್ತು  ಸುರೇಶ  ಊಟಕ್ಕೆ  ಕುಳಿತರು. ಆಗ  ಕೆಲಸಗಾರರು  ಊಟ  ಬಡಿಸಲು  ಬಂದಾಗ, ಮಹಲಿಂಗ  “ಪರವಾಗಿಲ್ಲ,   ನೀವು   ಮನೆಗೆ  ಹೋಗಿ  ಲೇಟಾಗಿದೆ, ನಾವೇ   ಬಡಿಸಿಕೊಳ್ಳುತ್ತೇವೆ”ಎಂದು ಕೆಲಸಗಾರರನ್ನು  ಮನೆಗೆ  ಕಳುಹಿಸಿದನು. ನಂತರ  ಸುರೇಶನು  ಕೈ  ತೊಳೆದುಕೊಳ್ಳಲು  ಹೋಗುವಾಗ  ತನ್ನ  ಕೊಟನ್ನು  ಅಲ್ಲಿಯೇ  ಬಿಚ್ಚಿಟ್ಟು  ಹೋದನು.ನಂತರ  ಬಂದು  ಊಟ  ಮಾಡುಷ್ಟರಲ್ಲಿ  ಅವನಿಗೆ  ಲಸಿಕೆ  ತೆಗೆದುಕೊಳ್ಳುವುದು  ನೆನಪಾಯಿತು. ಆಗ  ಅವನು  ಕೋಟಿನಲ್ಲಿದ್ದ  ಔಷಧಿಯನ್ನು  ತೆಗೆದುಕೊಂಡನು. ನಂತರ  ಎಲ್ಲರೂ  ಊಟ  ಮುಗಿಸಿ   ತಮ್ಮ  ಮನೆಗಳಿಗೆ  ಹೋದರು.

              ಬೆಳಗ್ಗೆಯಾಯಿತು, ಪಾರ್ಟಿ  ಬಹಳ  ಜೋರಾಗಿ  ಮಾಡಿ,  ಯಾರೂ  ಕೆಲಸಕ್ಕೆ  ಹೋಗದೆ  ಮನೆಯಲ್ಲಿಯೇ  ಮಲಗಿಕೊಂಡಿದ್ದರು. ಗಂಟೆ   ಹನ್ನೊಂದಾದರೂ  ಸುರೇಶ  ಇನ್ನೂ ಮಲಗಿದ್ದನ್ನು ನೋಡಿ  ಅವನ  ತಂದೆ   ಏಬ್ಬಿಸಲು  ಹೋದಾಗ  ಒಂದೇ  ಕ್ಷಣ   ಗಾಬರಿಯಾಯಿತು. ನೋಡಿದರೆ, ಸುರೇಶನು  ರಕ್ತದ  ಮಡುವಿನಲ್ಲಿ  ಬಿದ್ದಿದ್ದ.  ಅವರು    ಕುಸಿದು  ನೆಲಕ್ಕೆ  ಬಿದ್ದರು. ತಕ್ಷಣ  ಪೊಲೀಸರಿಗೆ  ಫೋನ್  ಮಾಡಿ  ಕರೆಸಿದರು.ಆಗ  ತಕ್ಷಣ  ಆ  ಊರಿನ  ಂಅP   ಬಂದು  ಸುರೇಶನ  ತಂದೆ,ತಾಯಿಗೆ  ಇದರ  ಬಗ್ಗೆ  ವಿಚಾರಿಸಿದರು. ಆಗ  ಸುರೇಶನ  ತಂದೆ  “ ಸರ್  ಚೆನ್ನಾಗಿಯೇ  ಇದ್ದ.  ನಿನ್ನೆ ಪಾರ್ಟಿಗೆಂದು  ಹೋಗಿ  ಈಗ  ಈ ಅವಸ್ತೆಯಲ್ಲಿದ್ದಾನೆ” ಎಂದರು.

                 ಆಗ  ಂಅP “ ಅದು  ಯಾವ  ಪಾರ್ಟಿ?, ಯಾರೂ  ಮಾಡಿದ್ದರು?”  ಅಂದಾಗ  ಸುರೇಶನ  ತಂದೆ  ಎಲ್ಲಾ  ವಿಷಯವನ್ನು  ತಿಳಿಸಿದರು.  ತಕ್ಷಣ  ಆ  ಮೂರು  ಜನ  ಸ್ನೇಹಿತರನ್ನು  ಕರೆಸಿದರು. ಆಗ  ಬಸವರಾಜ,ಸೋಮ  ಮತ್ತು  ಮಹಲಿಂಗ  ಪೊಲೀಸ್  ಠಾಣೆಗೆ  ಬಂದರು.  ಆಗ  ಂಅP  ಅವರಿಗೆ  “ ಹೇಳಿ,  ನಿನ್ನೆ  ಪಾರ್ಟಿ  ನೀವು  ಅಂದುಕೊಂಡ ಹಾಗೆ  ಮುಗಿಯಿತಾ?” ಎಂದರು. ಆಗ  ಆ  ಮೂವರು  ತಮ್ಮ  ತಮ್ಮ  ಮೂಖ  ನೋಡಿಕೊಂಡರು.  “  ನಿಜ  ಹೇಳಿ  ನಿನ್ನೆ  ಸುರೇಶನನ್ನು  ಪಾರ್ಟಿಗೆಂದು  ಕರೆಸಿ  ಏನು  ಮಾಡಿದಿರಿ?”.  ಆಗ  ಸೋಮು  ಯಾಕೆ  ಸರ್  ಏನಾಗಿದೆ  ಈಗೆ? ಸುರೇಶ  ಎಲ್ಲಿದ್ದಾನೆ ? ಎಂದು  ಕೇಳಿದನು. ಆಗ  ಂಅP “ ನಿಮ್ಮ  ಸುರೇಶನನ್ನು ನೀವೆ  ಕೊಲೆ  ಮಾಡಿ  ಈಗ  ನನ್ನನ್ನು  ಕೇಳಿದರೆ  ನಾನೇನು   ಹೇಳಲಿ”  ಎಂದನು.ಆಗ  ಸೋಮ,ಮಹಲಿಂಗು ಮತ್ತು  ಬಸವರಾಜ   “ಸರ್  ನೀವು  ಏನು  ಹೇಳುತ್ತಿದ್ದಿರಾ.ನಮ್ಮ್  ಸುರೇಶನಾ....  ಸರ್  ನಮ್ಮನ್ನು  ಪ್ಲೀಸ್  ಬಿಡಿ  ನಾವು  ಅವನನ್ನು  ನೋಡಬೇಕು”  ಎಂದರು.

         ಆಗ  ಂಅP  ಬಿಡುತ್ತೇನೆ.  ಮೊದಲು  ನೀವು  ಕೊಲೆ  ಯಾರು  ಮಾಡಿದ್ದೆಂದು  ಹೇಳಿ  ಎಂದನು.ಅಷ್ಟರಲ್ಲಿ  ಸುರೇಶನ  ಪೊಸ್ಟಮಾಟಮ್  ರಿಪೋರ್ಟ  ಬಂದಿತು. ಆಗ  ಂಅP  “ನೀವು  ಹೋಗಿ  ಮತ್ತೆ  ನಿಮ್ಮನ್ನು  ಕರೆಸುತ್ತೇನೆ”  ಎಂದು  ಹೇಳಿ  ಕಳಿಸಿದರು.ನಂತರ  ಂಅP   ರಿಪೋರ್ಟ  ನೋಡಿದಾಗ  ಸುರೇಶನ  ದೇಹದಲ್ಲಿ  ವಿಷ  ಇರುವುದರಿಂದ  ಅವನು  ಸತ್ತಿದ್ದಾನೆ.  ಎಂದು  ಇತ್ತು.ಆಗ  ಂಅP  ಸುರೇಶನ  ಮನೆಗೆ  ಹೋಗಿ,  ಅವನÀ  ತಂದೆ,ತಾಯಿಗೆ  “ ನಿಮ್ಮ  ಮಗ  ಏನಾದ್ರೂ  ಧೂಮಪಾನ  ಅಥವಾ  ಏನಾದ್ರೂ  ದೇಹಕ್ಕೆ  ತೆಗೆದುಕೊಳ್ಳುತ್ತಿದ್ದನೇ?”  ಎಂದು  ಕೇಳಿದರು.  ಆಗ  ಸುರೇಶನ  ತಂದೆ “ಸರ್  ಅವನಿಗೆ  ಅಂತ   ಹವ್ಯಾಸಗಳೇನೂ   ಇರಲ್ಲಿಲ್ಲ್ಲ   ಅದರೆ  ಅವನ  ಆರೋಗ್ಯ  ಸರಿ  ಇಲ್ಲದಿದ್ದಾಗ  ಅವನಿಗೆ  ದಿನವೂ  ಡಾಕ್ಟರ್  ಬಂದು  ಲಸಿಕೆ   ಹಾಕುತ್ತಿದ್ದರು” ಎಂದರು.ಮತ್ತು  ಆ  ಔಷಧಿ  ಬೋಟಲ್‍ನ್ನು  ತಂದುಕೊಟ್ಟರು

          ಂಅP   ಇವನೆಲ್ಲಾ  ತೆಗೆದುಕೊಂಡು  ಆಫೀಸ್‍ಗೆ  ಹೋದನು. ಂಅPಗೆ  ಈ  ಸಾವು  ಹೇಗಾಯಿತು  ಎಂಬುದರ  ಬಗ್ಗೆ  ತುಂಬಾ  ಯೋಚನೆ  ಮಾಡುತ್ತಾ  ಕುಳಿತನು.  ಏನೂ  ತಿಳಿಯುತ್ತಿಲ್ಲಾ  ಯಾರು  ಏನೂ  ಮಾಡಿದರೆನ್ನುವುದು  ಗೋತ್ತಾಗುತ್ತಿಲ್ಲವಲ್ಲಾ  ಎಂದು  ಯೋಚಿಸುತ್ತಾ  ಕುಳಿತನು.ಈಗೇ  ಕುಳಿತರೆ  ಆಗುವುದಿಲ್ಲವೆಂದು  ಸುರೇಶನ  ಮನೆಗೆ  ಹೋದನು. ಅವನ  ತಾಯಿಗೆ  “ಅಮ್ಮ  ನಾನೂ  ಸ್ವಲ್ಪಾ  ಸುರೇಶನ  ರೂಮ್  ಚೆಕ್  ಮಾಡಬೇಕು”  ಎಂದು  ರೂಮಿನಲ್ಲಿ  ಹೋದನು.  ರೂಮ್  ಪೂರ್ತಿಯಾಗಿ  ನೋಡಿದನು. ಆಗ  ನೋಡುವಾಗ  ಒಂದು  ಮುಖ್ಯವಾದ  ವಸ್ತು  ದೊರಕಿತು  ಮತ್ತು  ಮನೆಯನ್ನು  ನೋಡುವಾಗ  ಔಷಧಿ  ಬೊಟಲ್  ಸಿಕ್ಕಿತು.  ಈ  ಎರಡು  ವಸ್ತುಗಳನ್ನು  ಂಅP  ತೆಗೆದುಕೊಂಡು ಹೋದನು.  ಹೋಗಿ  ಔಷಧಿ  ಬೊಟಲ್‍ನಲ್ಲಿ  ಏನಿದೆ ಎಂದು  ಚೆಕ್  ಮಾಡಿಸಿದಾಗ  ಅದರಲ್ಲಿರುವ  ವಸ್ತು  ಮತ್ತು  ಸುರೇಶನ  ದೇಹದಲ್ಲಿರುವ  ವಿಷ  ಎರಡು  ಒಂದೇ  ಎಂದು  ತಿಳಿಯಿತು. ಆಗ  ಂಅP ಸುರೇಶನ  ಆಫಿಸಗೆ  ಫೋನ್  ಮಾಡಿ  ಸುರೇಶನ  ಸ್ನೇಹಿತರು  ಎಲ್ಲಿ  ಎಂದು  ಕೇಳಿದರು.ಆಗ  ಅಲ್ಲಿಯ  ಕೆಲಸಗಾರ  ಸರ್  ಅವರೆಲ್ಲಾ  ಸುರೇಶನ  ಮನೆಯಲ್ಲಿ  ಇದ್ದಾರೆ  ಎಂದನು.ಆಗ ಂಅP  ಇದೇ  ಸರಿಯಾದ  ಸಮಯವೆಂದು  ಸುರೇಶನ  ಮನೆಗೆ  ಹೋದನು.

              ಂಅPಯು  ಸುರೇಶನ  ಮನೆಗೆ  ಬಂದ  ತಕ್ಷಣ  ಮನೆಯಲ್ಲಿದ್ದವರೆಲ್ಲಾ  ಎದ್ದು  ನಿಂತರು. ಆಗ  ಂಅP  ಇನ್ನೂ  ಕಾದು  ಉಪಯೋಗ  ಇಲ್ಲವೆಂದು  ನೇರವಾಗಿ  ಸುರೇಶನ  ತಾಯಿಯ  ಹತ್ತಿರ  ಹೋಗಿ  ಅಮ್ಮ  ನಿಮ್ಮನು  ಅರೆಸ್ಟ  ಮಾಡಬೇಕಾಗಿದೆ  ಎಂದ  ತಕ್ಷಣ  ಎಲ್ಲರೂ  ಆಶ್ಚರ್ಯರಾದರು.ಆಗ  ಸುರೇಶನ  ತಂದೆ  ಸರ್  ನೀವು  ಏನೂ  ಹೇಳುತ್ತಿದ್ದಿರಾ, ಸ್ವಲ್ಪಾ  ಮರ್ಯಾದೆ  ಇರಲಿ  ಎಂದನು. ಆಗ  ಂಅP  ಸರ್  ನಾನೂ  ನಿಜ  ಹೇಳುತ್ತಿದ್ದೇನೆ.ಅಮ್ಮಾ  ನೀವು  ನಿಜಾ  ಹೇಳುತ್ತಿರೊ  ಇಲ್ಲಾ  ನಾನೇ  ಹೇಳಲೋ  ಎಂದನು.ಆಗ  ಆಕೆ ನಾನು ಏನೂ  ಹೇಳಲಿ  ನನಗೇನೂ  ಗೋತ್ತಿಲ್ಲಾ  ಎಂದಳು. ಆಗ  ಂಅP  ಹೌದಾ  ಎಂದು  ಆಕೆಯ   ಅಣ್ಣನನ್ನು  ಕರೆದುಕೊಂಡು  ಬಂದು  ನಿಲ್ಲಿಸಿದರು.  ಈಗಾದ್ರೂ  ಹೇಳ್‍ತಿರೋ  ಇಲ್ಲಾ  ನಿಮ್ಮ  ಸ್ವಂತ  ಮಗನನ್ನು  ಕರೆಸಲಾ  ಎಂದಾಗ  ಆಕೆ  ಭಯದಿಂದಾ  ಹೌದು  ನಾನೆ  ಅವನ  ಔಷಧಿಯ  ಬೊಟಲ್‍ನಲ್ಲಿ  ವಿಷ  ಬೇರೆಸಿದ್ದು  ಎಂದು  ಒಪ್ಪಿಕೊಂಡಳು.ಆಗ  ಲೇಡಿ  ಪೊಲೀಸ್  ಆಕೆಯನ್ನು  ಅರೆಸ್ಟ  ಮಾಡಿ  ಕರೆದುಕೊಂಡು  ಹೋದರು.ಆಗ  ಂಅP  ಸುರೇಶನ  ಸ್ನೇಹಿತರಿಗೆ  ಕ್ಷಮಿಸಿ  ನಿಮಗೆ  ತೊಂದರೆಕೊಟ್ಟೆ  ಎಂದನು.ಆಗ  ಸುರೇಶನ  ಸ್ನೇಹಿತರು “ ಂಅP   ಸರ್  ಸುರೇಶನ  ತಾಯಿ  ಹೀಗೆಂದು  ನಮಗೆ  ಗೊತ್ತಿರಲಿಲ್ಲಾ. ಆದರೆ  ನಿಮಗೆ  ಈ ಸತ್ಯ  ಹೇಗೆ ತಿಳಿಯಿತು”  ಎಂದು  ಕೇಳಿದರು.
                  ಆಗ    ಂಅP  “ನಾನೂ  ಸುರೇಶನ  ರೋಮ್  ನೋಡುವಾಗ  ನನಗೆ  ಒಂದು   ಔಷಧಿ  ಬೊಟಲ್  ಮತ್ತು  ಡೈರಿ  ಸಿಕ್ಕಿತು. ಆ  ಡೈರಿಯಲ್ಲಿ  ಸುರೇಶನು  ‘ಮೌನ  ಮಾತಾದಾಗ’  ಎಂದು  ತನ್ನ  ಆತ್ಮಚರಿತೆಯನ್ನು  ಬರೆದಿದ್ದಾ, ಅದರಲ್ಲಿ “ ನಾನೂ  ಸುರೇಶ  ನನ್ನದು  ತುಂಬು  ಸಂಸಾರ  ಅಲ್ಲಿ  ನಾನೂ,ನನ್ನ  ತಂದೆ  ಮತ್ತು  ನನ್ನ  ತಾಯಿ ತುಂಬಾ  ಸಂತೋಷದಿಂದ  ಇದ್ದೆವು.ಆದರೇ  ನನ್ನ  ದೂರಾದುಷ್ಟವೇನೆಂದರೆ  ನನ್ನ  ಪ್ರೀತಿಯ  ತಾಯಿ  ನಾನೂ  ಚಿಕ್ಕವನಿದ್ದಾಗಲೇ  ನನ್ನನ್ನು  ಬಿಟ್ಟು  ದೇವರ  ಹತ್ತಿರ  ಹೋಗಿಬಿಟ್ಟಲು.ಆಗ  ನನ್ನ  ತಂದೆಗೆ  ಮನೆಯಲ್ಲಿ  ಎಲ್ಲರೂ  ಸೇರಿ ಎರಡನೇ  ಮದುವೆ   ಮಾಡಿಸಿದರು.ಆದರೆ  ನನಗೆ  ಅವರಿಂದಾ  ತಾಯಿಯ  ಪ್ರೀತಿ  ಸಿಗಲಿಲ್ಲಾ.  ಅದರೆ  ನನಗೆ  ಆ  ಪ್ರೀತಿ  ಸಿಕ್ಕಿದ್ದು   ನನ್ನ  ಸ್ನೇಹಿತರಿಂದಾ  ಮಾತ್ರ, ಒಂದು  ದಿನ  ನಾನು  ಮನೆ  ಒಳಗೆ  ಬರುವಾಗ  ನನ್ನ  ಚಿಕ್ಕಮ್ಮ  ಮತ್ತು  ಅವಳ  ಅಣ್ಣ  ನನ್ನ  ಬಗ್ಗೆ  ಮಾತನಾಡುತ್ತಿದ್ದರು.  ಅದು“ ಸುರೇಶನು  ದೊಡ್ಡವನು  ಮುಂದೆ  ಅವನ  ತಾತನ  ಆಸ್ತಿ  ಎಲ್ಲಾ  ಅವನಿಗೆ  ಸೇರುತ್ತೆ  ಹೇಗಾದ್ರೂ  ಮಾಡಿ  ಅವನನ್ನು  ಮುಗಿಸಬೇಕು”  ಎಂದು  ಚಿಕ್ಕಮ್ಮನ  ಅಣ್ಣ  ಹೇಳುತ್ತಿದನು. ಅದಕ್ಕೆ  ನಾನು  ಇವರ  ಹತ್ತಿರ  ಇರುತಿರಲಿಲ್ಲಾ. ನನ್ನ  ಸಾವು   ನನಗೆ  ಯಾವಗಾದ್ರೂ  ಬರಬಹುದೆಂದು  ನನಗೆ  ತಿಳಿದಿತ್ತು”  ಎಂದು  ಸುರೇಶನ  ಆತ್ಮಚರಿತ್ರೆಯಲ್ಲಿ  ಬರೆದಿದ್ದನು. ಮತ್ತು  ಆ  ಬೊಟಲ್  ಮೇಲೆ  ಆಕೆಯ  ಬೆರೆಳಿನ  ಗುರುತುಗಳಿದ್ದವು. ನಾನು ಇವೆಲ್ಲವುಗಳನ್ನು  ಉಪಯೋಗಿಸಿಕೊಂಡೆ  ಮತ್ತು  ಆಕೆಯ  ಅಣ್ಣನಿಗೆ  ಪೊಲೀಸ್  ಶೈಲಿಯಲ್ಲಿ  ವಿಚಾರಿಸಿದಾಗ  ಅವನು  ಎಲ್ಲಾ  ವಿಷಯ  ಬಾಯಿ  ಬಿಟ್ಟ” ಎಂದು   ಂಅP    ಹೇಳಿ  ಹೋದರು.

        ಆಗ ಸುರೇಶನ   ಗೆಳೆಯರೆಲ್ಲಾ  ಒಬ್ಬ  ಮಾಣಿಕ್ಯದಂತಾ  ಸ್ನೇಹಿತನನ್ನು  ಕಳೆದುಕೊಂಡೆವೆಂದು,   ಇತ್ತ  ಹೆಂಡತಿಯ  ಮೋಸವನ್ನು  ನೋಡಿದ  ಗಂಡ  ಮತ್ತು  ತನ್ನ  ಮುತ್ತಿನಂತ  ಮಗನು  ಜೀವನದಲ್ಲಿ  ಇಷ್ಟು  ನೋವನ್ನು  ಅನುಭವಿಸಿ  ತನ್ನನ್ನು  ಬಿಟ್ಟು  ಹೋದನೇಂದು  ಅಳುತ್ತಿದ್ದಾಗ, ಸುರೇಶನ  ಸ್ನೇಹಿತರೆಲ್ಲಾ  ಬಂದು  ಸುರೇಶನ  ತಂದೆಯನ್ನು  ತಮ್ಮ  ಮನೆಗೆ  ಕರೆದುಕೊಂಡು  ಹೋಗಿ  ತಮ್ಮ   ಹೆತ್ತವರಿಗಿಂತಲೂ  ಹೆಚ್ಚಾಗಿ  ನೋಡಿಕೊಳ್ಳುತ್ತಿದ್ದರು.                                                  
                                                                                                       By:  ಭರತಕುಮಾರ.ಪಿ.ಮೇಗೂರ
                                         4th Sem
                                                                                            

No comments:

Post a Comment

COMMENT